Friday, March 17, 2017

ಕನಸುಗಳಿಲ್ಲದ ಜೀವನದ ಮಜಲುಗಳು

ಕನಸುಗಳಿಲ್ಲದ  ಜೀವನದ ಮಜಲುಗಳು
ಗರಿಗೆದರಿ ನಿಂತ ಹದ್ದಿನ ಮರಿಯಂತೆ
ಹಾರಿದರೆ ಬಾನೆತ್ತರಕೆ, ಬಿದ್ದರೆ
ಪಾತಾಳಕೆ

ಇಂದ್ಯಾಕೊ ಮನಸು ಹರಿವ ನದಿಯಾಗಿರದೆ,
ನಿಂತ ನೀರಾಗಿ ಸೊಳ್ಳೆ ಮೊಟ್ಟೆ ಇಟ್ಟಿವೆ
ಕಪ್ಪೆಗಲ್ಯಾಕೋ ಸೈಲೆಂಟಾಗಿವೆ


ಅವರು ಇವರು ಅವರ್ಯಾರು
ಪರಿಚಯವಿಲ್ಲದವರು,,,ನನಗೇನಂತೆ
ಸಾಗುವ ಸಾದಿಯಲ್ಲಿ ಪ್ರಯಾಣಿಕರು

ಬಸ್ಸನ್ನೇರಿದೆ,,,ರೈಟ್ ಅಂದ್ರು
ಠುಸ್ಸ್ ಅಂದಿತು ಟಯರು
ಎಲ್ಲರು ಬ್ಯಾರೆ ಬಸ್ಸಿಗೆ ಲೆಫ್ಟ್ ಆದರು 

Wednesday, October 26, 2016

Windows ಓಪನ್ ಆಯ್ತು

ಒತ್ತಡದಿಂದ ಬಚಾವಾಗಲು Esc ಒತ್ತಿದೆ...
F1 ಏನೋ ಹೇಳಿದಂಗಾಯ್ತು
Shift ಅಂತ ಕೇಳಿದಂಗಾಯ್ತು
ಸುಮ್ಮನೆ Enter ಒತ್ತಿದೆ
Windows ಓಪನ್ ಆಯ್ತು

Tuesday, July 19, 2016

ಟೂಜಿ ತ್ರೀಜಿ ಎಲ್ಲ ಬರೀ ಕ್ರೇಜಿ

ಆ ಜಿ ಈ ಜಿ,,ಎಲ್ಲಿದೆ ಫೋರ್ಜಿ
ಟೂಜಿ ತ್ರೀಜಿ ಎಲ್ಲ ಬರೀ  ಕ್ರೇಜಿ
ಅಲ್ಲಿದೆ ಐಡಿಯಾ ಅಂತ ಇಲ್ಲಿದೆ ಬರೀ ಗಾಳಿಮಾತು
ಎಲ್ಲ ಕಡೆ ನಾಯಿಯಂತೆ ಕಾದರು ಸಿಗಲಿಲ್ಲ ಭರವಸೆ
ಭಾರತ ಸುತ್ತಿದರು ಸಿಗದೇ ಹೋಯ್ತು ಗಾಳಿಕೋಶ
ಆ ಜಿ ಈ ಜಿ,,ಎಲ್ಲಿದೆ ಫೋರ್ಜಿ
ಟೂಜಿ ತ್ರೀಜಿ ಎಲ್ಲ ಬರೀ  ಕ್ರೇಜಿ

ಅಲ್ಲಿ ಸಿಗುತ್ತಿದೆಯಂತೆ ಉಚಿತ ವೈಪೈ..
ಇಲ್ಲಿರುವುದಂತೆ ನಿಸ್ತಂತು ಗೋಪುರ
ವೈಫಿನ ಕರೆ ಬಂದಾಗಲೇ ಸುಮದುರ ನುಲಿ
"ನಿಮ್ಮ ಕರೆಯನ್ನು ಸ್ವೀಕರಿಸಲಾಗುತ್ತಿಲ್ಲ"
ಆ ಜಿ ಈ ಜಿ,,ಎಲ್ಲಿದೆ ಫೋರ್ಜಿ
ಟೂಜಿ ತ್ರೀಜಿ ಎಲ್ಲ ಬರೀ  ಕ್ರೇಜಿ

ಹೈಕಂತೆ ವಾಟ್ಸಾಪು ಸ್ನಾಪುಚಾಟು ಅಂತೆ
ತಿಂಗಳಿಗೆ ಇನ್ನೂರೈವತ್ತಕ್ಕೆ ಒಂದು ಜಿಬಿ ಅಂತೆ
ಬಳಕೆಗೆ ಸಿಗೋದು ಐನೂರು ಎಂಬಿ ಅಂತೆ,
ಉಳಿದವು ಜೇಬಿಲ್ಲದ್ದ ಜಿಲೇಬಿ ಅಂತೆ
ಆ ಜಿ ಈ ಜಿ,,ಎಲ್ಲಿದೆ ಫೋರ್ಜಿ
ಟೂಜಿ ತ್ರೀಜಿ ಎಲ್ಲ ಬರೀ  ಕ್ರೇಜಿ

ಕಿಟಿಕಾಟು ಲಾಲಿಪಾಪು ಮಿಠಾಯಿ
ತಿಂಗಳಿಗೆ ನಾಲ್ಕು ಸಲ ಹೊಸದಿಕೆ
ಆಟದ ಮೈದಾನವಿದ್ದರೂ ಆಡಂಗಿಲ್ಲ,
ಅದೇನಿದ್ದರೂ ಇಳಿಸುವುದು ಮಾತ್ರ
ಆ ಜಿ ಈ ಜಿ,,ಎಲ್ಲಿದೆ ಫೋರ್ಜಿ
ಟೂಜಿ ತ್ರೀಜಿ ಎಲ್ಲ ಬರೀ  ಕ್ರೇಜಿ

ಹಿಮಾಲಯದಲ್ಲಿರುವ ಫೋರ್ಜಿ, ಅಲ್ಲಿನ ಸ್ವಾಮಿಗಳಿಗಂತೆ
ಇಲ್ಲಿ ನಗರದಲ್ಲಿ ತ್ರೀಜಿ  ಸಿಗದೇ ಅಲೆದಾಡುವರು
ಬೇಕಾದ ಸಮಯದಲ್ಲಿ ಕಡಿತ ಮಾಡುವರು
ನೆರೆಮನೆಯ ವೈಫು ಸಿಕ್ಕರು ಸಿಗದು ವೈಫೈ
ಆ ಜಿ, ಈ ಜಿ,,ಎಲ್ಲಿದೆ ಫೋರ್ಜಿ
ಟೂಜಿ ತ್ರೀಜಿ ಎಲ್ಲ ಬರೀ  ಕ್ರೇಜಿ 

Friday, April 29, 2016

ಆದರೆ...ಆದರೆ

ಆದರೆ...ಆದರೆ
ಮುರಿದ ಸಂಕ(ಸೇತುವೆ)ವನ್ನು ಸರಿಪಡಿಸಬಹುದು,
ಆದರೆ, ಮುರಿದ ಮನಸನ್ನಲ್ಲ,,,,
ಒಡೆದ ಹಾಲು ಮೊಸರಗಬಲ್ಲುದು, 
ಆದರೆ,, ಕಳೆದುಹೋದ ಪ್ರೀತಿ ಮರುಸಿಗದು,,
ಸಮಯವನ್ನು ಕೊಳ್ಳ(ಲ್ಲ)ಬಹುದು,
ಆದರೆ,,ಮುರಿದುಹೋದ ಸಂಭಂದವನ್ನಲ್ಲ ,,
ಕಾಟ ಕೊಟ್ಟವರು ಇಲ್ಲವಾಗಬಹುದು
ಆದರೆ,,ಕಾಡುವ ನೆನಪುಗಳು ಸಾಯಲ್ಲ ,,

Tuesday, March 29, 2016

Save Water

-----
ನೀರಿಗೆ ಬೀರು ಬ್ರಾಂಡಿ ವಿಸ್ಕಿ ಬೆರೆಸಬೇಡಿ
ರಮ್ಮು ಜಿನ್ನು ವೊಡ್ಕಾಗೆ ನೀರು ಹಾಕಬೇಡಿ
ನೀರನ್ನು ಉಳಿಸಿ,,,
ಜಲ  ಅಮೂಲ್ಯ 

ನಗರಜೀವನ

--ನಗರಜೀವನ--
ಅಂಕಲ್ ಆಂಟಿ ಮದ್ಯೆ ಕಳೆದುಹೋಗಿರುವ ಮುದಿಜೀವನ
ಅನಾಥ ಅಸ್ತಿರತೆಯ ಭಯದಲ್ಲಿ ಬದುಕು ಕಟ್ಟಿಕೊಳ್ಳುವ ಹಂಬಲ
ಇದ್ದೋನು ಬಿದ್ದ, ಗೆದ್ದೊನು ಒದ್ದ, ಬಿದ್ದವನು ಅಬದ್ದ
ಪದ್ಯನು ಅಲ್ಲ, ಗದ್ಯನು ಅಲ್ಲ, ಕೇಳುವುದು ಸಲ್ಲ

Monday, September 14, 2015

ಬದುಕು ಮಾಯಬಜಾರು..

ಬದುಕು ಮಾಯಬಜಾರು..
ಎಚ್ಚರಿಕೆ..
ಇಲ್ಲಿ ಕನಸುಗಳನ್ನು ಮಾರುವವರು,
ಕದಿಯುವವರು ಇದಾರೆ