Wednesday, February 4, 2015

ಈ ದಿನ ನನ್ನದು , ನಾಳೆ ನನ್ನದು.. ನೆನ್ನೆ ಮಾತ್ರ ನನ್ನದಲ್ಲ,

ಈ ದಿನ ನನ್ನದು , ನಾಳೆ ನನ್ನದು..

ನೆನ್ನೆ ಮಾತ್ರ ನನ್ನದಲ್ಲ,
ನೆನ್ನೆ ನಡೆದಿದಕ್ಕೆ ನಾನು ಕಾರಣ ಅಲ್ಲ,
ವಿಧಿಯೊಳಗೆ ನಾನು ಆಟಗಾರ,
ತೀರ್ಪುಗಾರರ ನಿರ್ಧಾರವೇ ಅಂತಿಮ

ಜೀವವೆಂಬ ಮೈದಾನದಲ್ಲಿ,
ಬಲೆ ಕಂಬಗಳನ್ನು ನೆಟ್ಟವನು ಅವನೇ,
ಅವನಾಡಿಸಿದಂತೆ ಆಡಿದರೆ ಗೆಲುವು,
ಹನ್ನೆರಡನೆ ಬ್ಯಾಟುಗಾರ ಪ್ಯಾಡು ಕಟ್ಟಲ್ಲ...


1 comment:

Deepak said...

live the present moment.