Friday, February 13, 2015

ವರ್ತಭೂತಗಳ ಕೈಗೊಂಬೆಯೇ ನೀನು?

ಮರೆಯಲೆತ್ನಿಸಿದರೆ ಮರುಕಳಿಸುವುವು ನೆನಪುಗಳು,
ಗವಾಕ್ಷೀಲಿ ಹೊಕ್ಕ ಭೂತದಂತೆ..
ಕೇಕೆ ಹಾಕಿ ಕುಣಿಯುತ್ತವೆ, ನಿಯಂತ್ರಣವಿಲ್ಲದ ಆಶೆಗಳು,
ಒಮ್ಮೊಮ್ಮೆ ಕೋಪ ನಗು ರುದ್ರನರ್ತನ...  
ಕೆಣಕಹೋದರೆ ಸುಡುತ್ತವೆ ಭಾವನೆಗಳು, ಮಳೆಇಲ್ಲದೇ ಸೊರಗಿವೆ ಮನಗಳು,

ಮಟಮಧ್ಯಾನ್ಹದ ಸುಡುಬಿಸಿಲು, ಗೀಚಹೋದರೆ ನೆನಪಿಗೆ ಬರವು,
ಅರ್ಥ ರಾಗ ಭಾವ ಎಲ್ಲಾ ಗೂಡುಕಟ್ಟಿದ ಗೀಜಗ
ಪಡೆದಿದ್ದು ಅಲ್ಪ ಬಯಸಿದ್ದು ಸ್ವಲ್ಪ ಕಳೆದಿದ್ದು?
ವರ್ತಭೂತಗಳ ಕೈಗೊಂಬೆಯೇ ನೀನು??