ಓ ಬೆಳಕೇ , ಮತ್ತೆ ಮತ್ತೆ ನಿ ಯಾಕೆ ಕಾಡುತ್ತಿರುವೆ
ಮುಸುಗುತೆರೆಯಲೇ ಬೇಡ ಎಂದೆನಿತು ಸುಖವಾಗಿ ನಿದ್ರಿಪ
ಜನರಿಗೆ ಕಾಯಕ ಮಾಡಿಸಲು ನಿನ್ಯಾಕೆ ಚಡಪಡಿಸುವೆ !
ಸುಡುಬಿಸಿಲಲಿ ಬಿಳಿಚರ್ಮ ಕಪ್ಪಾಗಿ ಮೈ ಬೆವರ ನದಿಯಾಗಿ
ಹರಿದರೂ ನಿನ್ಯಾಕೆ ದಯೆ ತೋರುತ್ತಿಲ್ಲ !
ಸಂಜೆಯಾಗಲೆ೦ದು ಕಾದು ಸುಸ್ತಾಗಿ ಕನವರಿಸುವ
ಹೊತ್ತಿನಲ್ಲಿ ಚಂದ್ರನಾಗಿ ನೀ ಯಾಕೆ ಹಿ೦ಬಾಲಿಸುವೆ !
ಅಮಾವಾಸ್ಯೆ ಕತ್ತಲಲ್ಲೂ ನೀನಿಲ್ಲದೆ ಇದ್ದರೂ ಬೆಳಕ ನೀಡಬಲ್ಲೆವು
ಎಂದು ನಕ್ಕವು ನಕ್ಷತ್ರಗಳು, ನೀನ್ಯಾಕೆ ಕೇಳಿಸದೆ ಹೋದೆ !
ದೀಪದ ಕೆಳಗೆ ಕತ್ತಲು ಎ೦ದರಿತರು ಹಗಲು ರಾತ್ರಿಗಳೆ೦ಬ
ಪದರವನ್ನು ನಿನ್ಯಾಕೆ ಮಾಡಿಕೊಂಡೆ !
No comments:
Post a Comment