Thursday, February 12, 2015

"ಕ್ಯಾಂಡಲ್ ಭಾಗ್ಯ"

ಮಕ್ಕಳು ವಿದ್ಯುತ್  ಇದ್ದಾಗ ದೂರದರ್ಶನ ನೋಡಿರುವುದೇ ಕರಾವಳಿ ಕರ್ನಾಟಕದಲ್ಲಿ ಹತ್ತು ಮತ್ತು ಹನ್ನೆರಡನೆ ತರಗತಿ ಪರೀಕ್ಷೆಯಲ್ಲಿ ಜಿಲ್ಲೆಯು ಕೆಳಕ್ರಮಾ೦ಕದಲ್ಲಿ ಬರಲು ಕಾರಣ ಎಂದು ವಿದ್ಯಾರ್ಥಿ ಸಚಿವರು ತಿಳಿಸಿದ್ದಾರೆ . ಇದನ್ನು ಸರಿಪಡಿಸಲು ಮುಂದಿನ ದಿನಗಳಲ್ಲಿ ವಿದ್ಯುತ್ ಪೂರೈಕೆಯನ್ನು ಹಗಲುಹೊತ್ತಿನಲ್ಲಿ ಮಾತ್ರ ನೀಡಿ ಎಲ್ಲಾ ವಿದ್ಯಾರ್ಥಿಗಳ ಮನೆಗೆ ಒಂದು ತಿಂಗಳು "ಸೀಮೆಣ್ಣೆ ಭಾಗ್ಯ" ಮತ್ತ್ತು "ಕ್ಯಾಂಡಲ್ ಭಾಗ್ಯ" ಕೊಡಲು ಉನ್ನತ ಮಟ್ಟದ ಸಮಿತಿಯು ಸರ್ಕಾರಕ್ಕೆ ಸಲಹೆ ನೀಡಿದೆ ಎಂದು ತಿಳಿದುಬಂದಿದೆ. ಇದನ್ನು ಜಿಲ್ಲಾ ಶಿಕ್ಷಣ ಇಲಾಖೆ ಸ್ವಾಗತಿಸಿದ್ದು, ಪತ್ರಕರ್ತರು ವಿದ್ಯಾರ್ಥಿ ಸಚಿವರ ಸಂದರ್ಶನಕ್ಕಾಗಿ ತೆರಳಿದಾಗ ಸಚಿವರು ವಿದೇಶ ಪ್ರಯಾಣದಲ್ಲಿ ಇರುವುದಾಗಿ ಆಪ್ತ ಮೂಲಗಳು ತಿಳಿಸಿವೆ. ಇದರ ಬಗ್ಗೆ ವಿದ್ಯಾರ್ಥಿಗಳನ್ನು ಕೇಳಿದಾಗ ಅವರು ಇನ್ನು ನಿದ್ದೆಯಿಂದ ಎದ್ದಿಲ್ಲ, ಆಮೇಲೆ ಬನ್ನಿ ಎಂದು ಮಾತಾಪಿತೃಗಳು ಉತ್ತರಿಸಿದರೆಂದು ಎಂದು ಪತ್ರಕರ್ತರು ವರದಿ ಮಾಡಿದ್ದಾರೆ.

No comments: