ಕಾಲ್ಚೆಂಡು ಆಟವನ್ನು ನಿಷೇದಿಸಬೇಕೆಂದು ಸಾರ್ವಜನಿಕ ಹಿತ-ಸಕ್ತಿ ದಾವೆಯೊಂದು ಸುಪ್ರೀಂ ಕೋರ್ಟ್ನಲ್ಲಿ ದಾಖಲಾಗಿದೆ. ಒಂದು ಚೆಂಡಿನ ಹಿಂದೆ 11+11 ಆಟಗಾರರು ಓಡಿ ಓಡಿ ಅದನ್ನು ತುಳಿಯುವಂತೆ ಮಾಡುವುದು ಮತ್ತು ಅದನ್ನು 2 ಜನ ಅಂಪೈರ್ ಮಾಡುವುದು ಇದು ಪ್ರಸ್ತುತ ಕಾಲಕ್ಕೆ ತಕ್ಕುದಾದುದಲ್ಲ, ಇದು ಮಾನವ ವಿರೋಧಿ ಆಟವೆಂದು ತಕಾರಾರು ದಾಖಲಾಗಿದೆ ಎಂದು ತಿಳಿದುಬ೦ದಿದೆ. ಮೆಸ್ಸಿ, ರೋನಲ್ದೋ ಮುಂತಾದ ಆಟಗಾರರ ವಿರುದ್ದ ಕಾರ್ಮಿಕ ಕಾಯ್ದೆ ಅನ್ವಯ ದಾವೆ ಹೂಡಲಾಗುವುದು ಎಂದು "ಆಧುನಿಕ ಜನರ ಹಣೆಬರಹ ತಿದ್ದುವ ಸಂಘಟನೆ" ಮುಖ್ಯಸ್ಥ ಡಾ.ಪೆದಂಬು ತಿಳಿಸಿದ್ದಾರೆ. ಈಗಾಗಲೇ ಮಂಗಳೂರಿನ ಕಂಬಳ ನಿಷೇಧ, ಜಪಾನಿನಲ್ಲಿ ಹೋರಿ ಬೆದರಿಸುವ ಸ್ಪರ್ದೆ ಮುಂತಾದ ಸ್ಪರ್ಧೆಗಳ ನಿಷೇಧಕ್ಕೆ ಹೋಗಿ ಕೈ ಸುಟ್ಟುಕೊಂಡಿರುವ ಈ ಸ೦-ಘಟನೆ ಮುಂದಿನ ದಿನಗಳಲ್ಲಿ ಉಳಿದ ಕ್ರೀಡೆಗಳತ್ತ ಗಮನಹರಿಸುವುದಾಗಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ ಎಂದು ನಮ್ಮ ಗೂಡಚಾರರು ಸಂದೇಶ ಕಳುಹಿಸಿದ್ದಾರೆ.
No comments:
Post a Comment