ಸಾವಿರಾರು ಎಕರೆ ಭೂಮಿಯನ್ನು ಒತ್ತುವರಿ ಮಾಡಿದಾಗಲು ರೈತ ಅಥವಾ ಭೂಮಾಲಿಕ ಸುಮ್ಮನಿರಬೇಕು, ಅದೇ ಭೂಮಿಯನ್ನು ೨ ಪೈಸೆಗೆ ಖರೀದಿಸಿ ಖಾಸಗಿಯವರಿಗೆ ೨೫ ಪೈಸೆಗೆ ಮಾರಿ ಬೆಂಗಳುರಿನಲ್ಲಿ ೨ ಸೈಟ್, ಬೆಳಗಾವಿಯಲ್ಲಿ ೧೫ ಎಕರೆ ಭೂಮಿ ಮಾಡುವ ಕುಳಗಳು ಎಸ್ಟೋ ಇವೆ,, ಭೂಮಿ ಕಳೆದುಕೊಂಡವನು ಮಾತ್ರ ಉಣ್ಣಕ್ಕೆ ತಿನ್ನಕ್ಕೆ ಗತಿಯಿಲ್ಲದೆ ರಸ್ತೆಬದಿಯಲ್ಲೊಂದು ಗೂಡಂಗಡಿ ಹಾಕಿದರೆ ಮರುದಿನವೇ ಅದನ್ನು ಕಿತ್ತುಹಾಕುವ ಅಧಿಕಾರಿಗಳು ಇದಾರೆ. ಪರಿಸರ ವಿರೋಧಿ ಆದರು ಪರವಾಗಿಲ್ಲ ನೇತ್ರಾವತಿಯಿಂದ ತಮಿಳುನಾಡಿಗೆ ನೀರು, ಕೇರಳಕ್ಕೆ ವಿದ್ಯುತ್ ಸಾಗಿಸಬೇಕೆಂಬ ಹಟ ಯಾಕೆ? ನಿಡ್ಡೊಡಿ, ಕೈಗಾ, ನೈಸ್ ರಸ್ತೆಗೆ ಭೂಮಿ ಕಳೆದುಕೊಂಡವರಲ್ಲಿ ರಾಜಕಾರಣಿ, ಸರ್ಕಾರ ಮತ್ತು ಅಧಿಕಾರಿಗಳ ಭೂಮಿ ಇದೆಯಾ? ತುಮಕೂರಿನಲ್ಲಿ ಕೈಗಾರಿಕಾ ವಲಯಕ್ಕೆ ೧೩೦೦೦ ಎಕರೆ ಭೂಮಿಯಲ್ಲಿ ಎಷ್ಟು ಭೂಮಿ ಭೂಮಾಫಿಯ ಕೈಸೇರಿದೆ/ಸೇರುತ್ತದೆ, ಅಲ್ಲಿ ಎಷ್ಟು ಬಹು ಮಹಡಿ ವಸತಿ ಸಂಕೀರ್ಣ ನಿರ್ಮಾಣ ಮಾಡುತ್ತಾರೆ ಎಂದು ನಿಮಗ್ಯಾರಿಗಾದ್ರು ಗೊತ್ತಿದೆಯ?? ಬಡವನ ಕೋಪ ದವಡೆಗೆ ಮೂಲ ಅನ್ನೋ ಹಾಗೆ ಅನ್ನ ಬೆಳೆಯೋ ರೈತನ ಮೇಲೆ ಸವಾರಿ ಯಾಕೆ?
No comments:
Post a Comment