Friday, February 13, 2015

ಬೆಳಕಿನ ಸೀರೆ ಎಂದರೆ ಬೆತ್ತಲು

ಬೆಳಕಿನ ಸೀರೆ ಎಂದರೆ ಬೆತ್ತಲು,
ಸೂರ್ಯನಿಲ್ಲ ಎಂದರೆ ಕತ್ತಲು,
ಕತ್ತಲು ಬೆತ್ತಲು ಮಧ್ಯೆ ಸುಡುಬಿಸಿಲು
ಯಾರಿಗೆ ಬೇಕು ಈ ಪಡಿಪಾಟಲು

ಕೆರೆಕಟ್ಟೆ ಎಲ್ಲಾ ಬತ್ತಲು
ಸೇರಿದರು ಎಲ್ಲರೂ ಗುಡಿಸಿಲು,
ದೇವರಿಗೆ ಹರಕೆ  ಬಟ್ಟಲು

ಸಂಜೆಯಾಯಿತು ಇಳಿ ಹೊತ್ತಲು

ಅಪ್ಪಳಿಸಿವೆ ಗುಡುಗು ಸಿಡಿಲು
ಕವಿದಿದೆ ಕಾರ್ಮೋಡ  ಕತ್ತಲು


ಸುರಿಯಿತು ಮಳೆ ಸುತ್ತಲು
ರವಿರಶ್ಮಿ ಎಲ್ಲೆಡೆ ಮುತ್ತಲು,
ನಡೆದರು ಜನ ಬಿತ್ತಲು..