2015 ಆಸ್ಕರ್ ಪ್ರಶಸ್ತಿ ಪ್ರಕಟವಾಗಿದೆ, ಪಕ್ಷಿ ಮಾನವ (Bird Man) ಚಿತ್ರಕ್ಕೆ ಉತ್ತಮ ಚಿತ್ರ ಸಿಕ್ಕಿದೆ, ಈ ಸಲವೂ ಭಾರತದಿಂದ ಒಂದೇ ಒಂದು ಚಿತ್ರವೂ ಕೂಡ ಪಟ್ಟಿಯಲ್ಲಿ ಇಲ್ಲ... ಪಕ್ಷಿ ಮಾನವ, ಬಾವಲಿ ಮನುಶ್ಯ ಮುಂತಾದ ವಿಭಿನ್ನ ಕಥೆ ಇರುವ ಚಿತ್ರಗಳು ಭಾರತೀಯ ಭಾಷೆಗಳಲ್ಲಿ ಯಾಕೆ ಬರಲ್ಲ?.. ವಾರವೆಲ್ಲ ದುಡಿದು ಮನಸು ಹಗುರ ಮಾಡಿಕೊಳ್ಳೋಣ ಎಂದು ಚಿತ್ರಮಂದಿರಕ್ಕ್ಕೆ ಹೋದರೆ ಅದೇ ಹಳೆ ಕಿತ್ತೊಗಿರುವ ಪ್ರೇಮ ಕಥೆ, ಹಳಸಲು ಸಾಮಾಜಿಕ ಸಂಬಂಧಗಳು, ಸಂಸ್ಕೃತಿ ಚಿತ್ರಗಳು, ಅಭಿರುಚಿ ಇಲ್ಲದ ಕಥೆಗಳು...ಇವೆ ತುಂಬಿಕೊಂಡಿರುವ ಭಾರತೀಯ ಚಲನಚಿತ್ರಗಳು ಅಧುನಿಕ ಕಥಾ ವಲಯಕ್ಕೆ ಕಾಲಿಡುವುದು ಯಾವಾಗ?ಅಲ್ಲೊಂದು ಇಲ್ಲೊಂದು ಎಂದಿರನ್, ಕೋಯಿ ಮಿಲ್ ಗಯಾ ಚಿತ್ರಗಳು ಬಂದರೂ ಗುಣಮಟ್ಟದ ಕಥೆಗಳು ಯಾಕೆ ಕಮ್ಮಿಯಾಗಿವೆ ???... ಇದರ ಬಗ್ಗೆ ಯಾರೂ ಯೋಚನೆ ಮಾಡುತ್ತಿಲ್ಲ,,,,
No comments:
Post a Comment