Tuesday, February 24, 2015

ಅಖಿಲ ಭಾರತ ರಿಯಾಯಿತಿ ಚಲನಚಿತ್ರ ನಿರ್ಮಾಪಕರ ಸಂಘದ ಪ್ರಕಟನೆ

ಆಸ್ಕರ್ ೨೦೧೫ ಸಾಲಿನಲ್ಲಿ ಯಾವುದೇ  ಭಾರತೀಯ ಚಿತ್ರಕ್ಕೆ ಪ್ರಶಸ್ತಿ ನೀಡದೆ ಇರುವುದನ್ನು ವಿರೋಧಿಸಿ "ಅಖಿಲ ಭಾರತ ರಿಯಾಯಿತಿ ಚಲನಚಿತ್ರ ನಿರ್ಮಾಪಕರ ಸಂಘ"ದ ವತಿಯಿಂದ ಆಸ್ಕರ್ ಫೆರ್ನಾ೦ಡಿಸ್  ಮನೆ ಎದುರು ಬ್ರಹತ್ ಪ್ರತಿಭಟನಾ ರ್ರ್ಯಾಲಿ  ಹಮ್ಮಿಕೊಳ್ಳಲಾಗಿದೆ ಎಂದು ಸಂಘದ  ಪ್ರಕಟನೆ ತಿಳಿಸಿದೆ. ಬರುವ ವರ್ಷದಿಂದ ಭಾರತೀಯ ಭಾಷೆಗಳಿಗಾಗಿಯೇ ಹೊಸ ಆಸ್ಕರ್ ಬಹುಮಾನ ನೀಡುವಂತೆ ಆಸ್ಕರ್ ಫೆರ್ನಾ೦ಡಿಸ್ರಿಗೆ ಕೋರಿಕೆ ಸಲ್ಲಿಸುವುದಾಗಿ ಉಲ್ಲೇಖಿಸಲಾಗಿದೆ.  ಅಲ್ಲದೆ ಮುಂದಿನ ವರ್ಷದಿಂದ ಆಸ್ಕರ್ ಪ್ರಶಸ್ತಿ ನಡೆಯುವ ಸಭಾಂಗಣದ ಹೊರಗೆ ಕಪ್ಪು ಪಟ್ಟಿ ಧರಿಸಿ "ಕೆಜ್ರಿವಾಲ್ ಹಜಾರ್ ಧರಣಿ" ಮಾಡಲಾಗುವುದೆಂದು ತಿಳಿಸಲಾಗಿದೆ.

 ಸಂಘದ ಕಾರ-ದರ್ಶಿ ಡಾ. ಕಾಪಿಕ್ಯಾಟ್ ತಿಳಿಸಿದಂತೆ,   ಪಾಲ್ಗೊಳ್ಳುವ ಎಲ್ಲ ಸದಸ್ಯರು ಈ ಕೆಳಗಿನ ಸೂಚನೆಗಳನ್ನು ಪಾಲಿಸಬೇಕಾಗಿ ಕೋರಿದ್ದಾರೆ.
೧  ಎಲ್ಲಾರು ಜೇಮ್ಸ್ ಬಾಂಡ್ ತರಹ ಡ್ರೆಸ್ (ಪಿಸ್ತೂಲ್ ಬಿಟ್ಟು)
೨. ಕನಿಷ್ಠ ೪ ವಿದೇಶಿ ಚಿತ್ರಗಳನ್ನು ನೋಡಿರಬೇಕು
೩. ಅಲ್ಲಿ ಇಲ್ಲಿ ಕಥೆ, ದೃಶ್ಯ, ಹಾಡು  ಕದ್ದು ಸಿನೆಮಾ ಮಾಡಿರಬೇಕು
೪. ಎರಡು ಲಕ್ಷದಲ್ಲಿ ಸಿನೆಮಾ ಮಾಡಿ ೫  ಲಕ್ಷ ಖರ್ಚು ತೋರಿಸಿರಬೇಕು
೬. ರಿಯಾಯಿತಿ ಸಿನೆಮಾ ಎಂದು ಪ್ರಶಸ್ತಿ ಗಳಿಸಲು ೨ ಗರಿಷ್ಟ ಲಾಬಿ ಮಾಡಿರಬೇಕು 
೭. ಸಿನೆಮಾ ಜನರು ನೋಡುವಂತೆ ಇರದೇ ಬರಿ ಪ್ರಶಸ್ತಿಗಾಗಿಯೇ ಮಾಡಿರಬೇಕು


No comments: