2015ನೆ ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ಪಾಕಿಸ್ಥಾನವನ್ನು ಅಲ್ಲಿನ ಮಹಿಳಾಮಣಿಗಳು ಸ್ವಾಗತ ಮಾಡಿದ್ದಾರೆ. ಪಾಕಿಸ್ತಾನವು ಭಾರತ ವಿರುದ್ಧ ಲೀಗ್ ಪಂದ್ಯದಲ್ಲಿ ಸೋತಾಗ ಅಲ್ಲಿ ಸಾವಿರಾರು ಟಿವಿಗಳು ಅಲ್ಲಿನ ದೇಶಭಕ್ತರಿಂದ ಪುಡಿಪುಡಿಯಾಗಲ್ಪಟ್ಟಿದ್ದು , ನೆಚ್ಚಿನ ಹಿಂದಿ ಧಾರಾವಾಹಿಗಳು ತಪ್ಪಿಹೊಗಿರುವುದನ್ನು ಅರಿತ ಮಹಿಳಾಮಣಿಗಳು "ಪಾಕಿಸ್ತಾನವು ಆಸ್ಟ್ರೇಲಿಯಾ ವಿರುದ್ಧ ಸೋತು ಮನೆಗೆ ಬಂದಿದ್ದೇ ಒಳ್ಳೇದು ಆಯಿತು, ನಮ್ಮ ಮನೇ ಟಿವಿಗಳು ಉಳಿದವು, ಯಾರದೋ ಸಿಟ್ಟು, ನಮ್ಮನೆ ಟಿವಿ ಪುಡಿಯಾಯಿತು" ಎಂದು ಹೆಸರು ಹೇಳಲಿಚ್ಚಿಸದ ಮಹಿಳೆಯೊಬ್ಬಳು ತಿಳಿಸಿದ್ದಾಳೆ ಎಂದು ಸುಳ್ಳುಸುದ್ದಿ ಬಾತ್ಮಿದಾರರು ವರದಿ ಮಾಡಿದ್ದಾರೆ. ಆದರೆ ಇದನ್ನು ಚೀನಾದ ಖ್ಯಾತ ಟಿವಿ ನಿರ್ಮಾಣ ಸಂಸ್ಥೆಯೊಂದು ವಿರೋದಿಸಿದ್ದು, ಅಲ್ಲಿ ಪುಡಿಯಾಗಿದ್ದು ಹಳೆಟಿವಿಗಳೆ ಹೊರತು ಹೊಸ ಎಲ್ಇಡಿ ಟಿವಿಗಳು ಅಲ್ಲ ಎಂಬುದನ್ನು ಕಂಪನಿ ವರದಿಯಲ್ಲಿ ದ್ರುಡಿಕರಿಸಿದೆ. ಟಿವಿಗಳು ಪುಡಿಯಾದ ಪಕ್ಷದಲ್ಲಿ ಕಡಿಮೆ ದರಕ್ಕೆ ಹೊಸ ಎಲ್ಇಡಿ ಟಿವಿ ಕೊಡುವ ಉದ್ದೇಶದಿಂದ ಆಯಾತ ಮಾಡಿಕೊಂಡ ಸಾವಿರಾರು ಟಿವಿಗಳು ತುಕ್ಕು ಹಿಡಿತಾವೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದ್ದು, ಅವುಗಳನ್ನುವಾಪಸು ಚೀನಾಕ್ಕೆ ಕಳುಹಿಸುವುದಾಗಿ ತಿಳಿಸಿದೆ. "ಟಿವಿಭಾಗ್ಯ" ಕೊಡುವ ಉದ್ದೇಶ ಇಟ್ಟುಕೊಂಡಿದ್ದ ಸರ್ಕಾರ ಕೂಡ ಈ ಸೋಲಿನಿಂದಾಗಿ ಕಂಗೆಟ್ಟಿದ್ದು , ಉಚಿತ ಡಾನ್ ಡೈರೆಕ್ಟ್ ಮತ್ತು ಎಲ್ಇಡಿ ವ್ಯವಸ್ತೆಯನ್ನು ಕೈಬಿಡುವುದಾಗಿ ಘೋಷಿಸಿದೆ.
No comments:
Post a Comment