Wednesday, June 10, 2015

ದಾರಿ ದೂರವಾದರು ಪಯಣಿಸುವ ಛಲ ಇರಲಿ

ಪಯಣಿಸುವ ದಾರಿ ದೂರವಾದಾಗ,
ತಿರುವುಗಳು ಕೂಡ ದೂರವೆನಿಸುತ್ತವೆ
ಕೊರೆತಕ್ಕೆ ಹೆಜ್ಜೆಗಳು ಅಳಿಸಿದರು ,
ಗುರುತನ್ನು ಮಾತ್ರ ಬಿಟ್ಟುಹೋಗಬೇಕು
ಗುರಿ ಒಂದೇ ಇರಲಿ, ಸೇರುವ ದಾರಿ ಅನೇಕ ಇರಲಿ

ದೂರದಲ್ಲೆಲ್ಲೋ ಹಡಗು, ನೊರೆತಕ್ಕೆ ತೇಲಿ ಬಂದಂತೆ ಭಾಸ
ನೆರಳಿನಾಟವ ನಂಬಬೇಡ ,ದೂರಕೆ ದೃಷ್ಟಿ ನೆಡು
ಮರಳಿ ಬಾರದು ಸಮಯ, ಮುಳುಗಿದ ಹಡಗು ನಷ್ಟವಾದಂತೆ
ದಾರಿ ದೂರವಾದರು ಪಯಣಿಸುವ ಛಲ ಇರಲಿ

Photo (C) Thimmappa

No comments: