ಕರಿಕಾಗೆಯೊಂದು ದಿಟ್ಟಿಸುತ್ತಿತ್ತು ಕಪ್ಪು ಮೋಡವನ್ನು ,
ಜನರು ಕಾದರು ತೂರುವ ಬಿಳಿ ಕಿರಣವನ್ನು
ಮಳೆ ಧೋ ಅಂದಿತು,
ನೆನೆದ ಕಾಗೆ ಕಾ ಕಾ ಎಂದು ಹಾರಿಹೋಯಿತು
ನೆರೆದ ಜನರು ಗೂಡು ಸೇರಿದರು
-------------------------------------
ಆತ ಬಡವ, ಆಕೆ ಬಡವಿ
ಇಬ್ಬರಿಗೂ ಅದು "ಬಯಸದೆ ಬಂದ ಭಾಗ್ಯ"
ತಿಂಗಳಿಗೆ ಒಂದು ಲಿಟರ್ "ಪಾಮೋಲಿನ್ ಎಣ್ಣೆ"
ಒಂದು ಕೆಜಿ ಉಪ್ಪು, ಎಂಟು ಕೆಜಿ ಅಕ್ಕಿ
-------------------------------
ಜಾತಿ ಜಾತಿ ಎಂದರು ಜ್ಞಾತಿಗಳು
ಕುಲ ಕುಲ ಎಂದರು ಯತಿಗಳು
ಸತ್ತವನು ಹೆಣವಾದ, ಸುಟ್ಟರು
ಗಾಳಿ ನೀ ಯಾವ ಜಾತಿ?
-------------------------------------
No comments:
Post a Comment