ಹಾಡು ಹುಟ್ಟುವ ಸಮಯದಲ್ಲಿ ಹಾಡು ಹುಟ್ಟಲಿಲ್ಲ
ಭಾವನೆ ತುಂಬಲೆಂದು ಭಾವನ ಹಿಂದೆ ಸುತ್ತಿದರೂ
ಬವಣೆ ನೀಗಲಿಲ್ಲ !
ಪ್ರಕೃತಿದತ್ತವಾಗಿರಲೆಂದು ಪರಿಸರ ಸುತ್ತಿದರೂ
ಹಸಿರು ಕಾಣಲಿಲ್ಲ !
ರಾಗವಾಗಿಯೇ ಬರಲೆಂದು ಕೋಗಿಲೆಯಾದರೂ
ಸರಾಗವಾಗಲಿಲ್ಲ !
ತಾಳವಾದ್ಯ ಮೇಳೈಸಲೆ೦ದರೂ ತಪ್ಪಿದ ತಾಳ
ಸರಿಯಾಗಲಿಲ್ಲ !
ಶೃತಿಲಯವಾಗಲೆಂದು ತಪಿಸಿದರೂ ಆಶಯ
ಬಯಲಾಗಲಿಲ್ಲ !
ನೈಜತೆ ಇರಲೆಂದು ನಿಜ ಹೇಳಿದರೂ ನೀವ್ಯಾರು
ನಂಬಲಿಲ್ಲ !
ಹಾಡು ಹುಟ್ಟುವ ಸಮಯದಲ್ಲಿ ಹಾಡು ಹುಟ್ಟಲಿಲ್ಲ
ಭಾವನೆ ತುಂಬಲೆಂದು ಭಾವನ ಹಿಂದೆ ಸುತ್ತಿದರೂ
ಬವಣೆ ನೀಗಲಿಲ್ಲ !
ಪ್ರಕೃತಿದತ್ತವಾಗಿರಲೆಂದು ಪರಿಸರ ಸುತ್ತಿದರೂ
ಹಸಿರು ಕಾಣಲಿಲ್ಲ !
ರಾಗವಾಗಿಯೇ ಬರಲೆಂದು ಕೋಗಿಲೆಯಾದರೂ
ಸರಾಗವಾಗಲಿಲ್ಲ !
ತಾಳವಾದ್ಯ ಮೇಳೈಸಲೆ೦ದರೂ ತಪ್ಪಿದ ತಾಳ
ಸರಿಯಾಗಲಿಲ್ಲ !
ಶೃತಿಲಯವಾಗಲೆಂದು ತಪಿಸಿದರೂ ಆಶಯ
ಬಯಲಾಗಲಿಲ್ಲ !
ನೈಜತೆ ಇರಲೆಂದು ನಿಜ ಹೇಳಿದರೂ ನೀವ್ಯಾರು
ನಂಬಲಿಲ್ಲ !
ಹಾಡು ಹುಟ್ಟುವ ಸಮಯದಲ್ಲಿ ಹಾಡು ಹುಟ್ಟಲಿಲ್ಲ
No comments:
Post a Comment