ದೇಶದ ಸಾರಿಗೆ ವ್ಯವಸ್ಥೆಯ ನಾಡಿಯಾದ ರೈಲ್ವೆ ದಿವಾಳಿ ಎದ್ದಿದೆ ಎಂಬ ಮಾತು ಕೇಳಿ ಬರ್ತಾ ಇದೆ. ನಮ್ಮ ದೇಶದಲ್ಲಿ ಯಾವುದೇ ವ್ಯವಸ್ಥೆಯನ್ನು ದಿವಾಳಿ ಮಾಡುವುದು ತುಂಬಾ ಸುಲಭ. ಎಲ್ಲರಿಗೂ ಕಡಿಮೆ ದರ - ಕಡಿಮೆ ಗುಣಮಟ್ಟದ ಸೇವೆ ಕೊಟ್ಟರೆ ಸಾಕು, ಎಲ್ಲರೂ ತುಂಬಾ ಖುಶಿಯಾಗ್ತಾರೆ. ನಿಜಾವಾಗಿಯು ರೈಲ್ವೆ ನಷ್ಟದಲ್ಲಿದೆಯೇ??
ಭಾರತೀಯ ಮನಸ್ಸುಗಳು ಹಾತೊರೆಯುವುದು ಎರಡು ಕಾರಣಕ್ಕೆ ೧. ಉಚಿತ ೨. ಅಗ್ಗ. ಇವೆರಡು ಕೊಟ್ರೆ ಅವರು ಗುಣಮಟ್ಟದ ಬಗ್ಗೆ ಯೋಚನೆ ಮಾಡಲ್ಲ. ಬೆಂಗಳೂರಿನಲ್ಲಿ ಸಾರಿಗೆ ಬಸ್ಸುಗಳು ಧೂಳು, ಕಸ ತುಂಬಿದ್ದರೂ ಯಾರು ಪ್ರಶ್ನೆ ಮಾಡಲ್ಲ, ರೈಲಿನಲ್ಲಿ ಟಾಯ್ಲೆಟ್ ಸರಿ ಇಲ್ಲ ಅಂದ್ರು ಯಾರು ಪ್ರಶ್ನೆ ಮಾಡಲ್ಲ (ಹವಾ ನಿಯಂತ್ರಿತ ಬೋಗಿ ಬಿಟ್ಟು), ಯಾಕೆಂದ್ರ ಅದರಲ್ಲಿ ಸಂಚಾರ ಮಾಡುವವರು ನಿತ್ಯ ಪ್ರಯಾಣಿಕರು ಅಲ್ಲ ಮತ್ತು ಅದನ್ನು ಪ್ರಶ್ನಿಸಿದರೆ ನ್ಯಾಯಾಲಯ ಮೆಟ್ಟಿಲು ಹತ್ತಬೇಕು, ಪರಿಹಾರ ಮತ್ತು ಬಗೆಹರಿಸುವ ವ್ಯಕ್ತಿಗಳು ೨ ಕೋಟಿ ಮೌಲ್ಯದ ಕಾರಿನಲ್ಲಿ ಅಥವಾ ವಿಮಾನದಲ್ಲಿ ಹೋಗ್ತಾ ಇರ್ತಾರೆ.ನೀವು ಎಷ್ಟು ಕಾಸು ಕೊಡ್ತಿರೋ ಅದಕ್ಕೆ ತಕ್ಕಂತೆ ಅಥವಾ ಅದಕ್ಕಿಂತ ಕಡಿಮೆ ಗುಣಮಟ್ಟದ ಸೇವೆ ಕೊಡಲು ಎಲ್ಲಾ ಸಂಸ್ಥೆಗಳು ತಯಾರಗಿರ್ತಾವೆ.
ದಿನೇಶ್ ತ್ರಿವೇದಿ ರೈಲ್ವೆ ಮಂತ್ರಿಯಾಗಿದ್ದಾಗ ೨ ಪೈಸೆ ಬೆಲೆ ಏರಿಕೆ ಮಾಡಿದ್ದಕ್ಕೆ ಖಾತೆ ಕಳೆದು ಕೊಳ್ಳಬೇಕಾಗಿ ಬಂತು. ಬಸ್ಸು, ರೈಲಿನಲ್ಲಿ ಮಾತ್ರ ಇವತ್ತಿಗೂ ಬೇಕುಬೇಡದವರಿಗೆಲ್ಲ ಉಚಿತ ಪಾಸು ಕೊಟ್ಟು ಕೊಟ್ಟು ಸಾರ್ವಜನಿಕ ಸಾರಿಗೆಯನ್ನು ಕೆಡಿಸಿಬಿಟ್ಟಿದ್ದಾರೆ. ಅದೇ ವಿಮಾನ ಪ್ರಯಾಣದಲ್ಲಿ ಯಾಕೆ ಇಲ್ಲ ಅಂತ ಜನಸಾಮಾನ್ಯ ಯಾವತ್ತು ಪ್ರಶ್ನೆ ಮಾಡಲ್ಲ ಯಾಕೆಂದ್ರೆ ಅದು ಅವನ ಪಾಲಿನ ತುತ್ತು ಅಲ್ಲ. ಅಮಾನತ್ ಬ್ಯಾಂಕ್ ದಿವಾಳಿ ಆದಾಗ ಯಾರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ನಿಮ್ಮದೇ ತೆರಿಗೆಹಣದಲ್ಲಿ ನಿಮಗೆ ಟೋಪಿ ಹಾಕುವ ವ್ಯವಸ್ಥೆ ಬೇಕ? ಅನಿಲ ಸಬ್ಸಿಡಿ, ಅನ್ನ ಭಾಗ್ಯ,....ಮುಂತಾದ ಭಾಗ್ಯಕ್ಕೆ ನಿಮ್ಮದೇ ತೆರಿಗೆ ಹಣ ವ್ಯಯವಾಗುತಾ ಇರೋದು.. ಈ ಉಚಿತ, ಸಬ್ಸಿಡಿ, ರಿಯಾಯಿತಿ, ಅಗ್ಗ ಪದಗಳು ಸರ್ಕಾರಿ ವ್ಯವಸ್ಥಯಲ್ಲಿ ಅರ್ಥ ಕಳೆದು ಕೊಂಡಿದೆ.

1 comment:
Uchitadedege iro mindset, drushtikona badalaagade naav eshte bobbe haakidru en upayoga illa
Post a Comment