Wednesday, March 4, 2015

ನಗುವಾಗ ನಿ ನಕ್ಕುಬಿಡು, ಅಳುವಾಗಿ ಕಾಡಬೇಡ

ನಗುವಾಗ ನಿ ನಕ್ಕುಬಿಡು, ಅಳುವಾಗಿ ಕಾಡಬೇಡ 
ಕುಣಿವಾಗ ನಿ ಕುಣಿದುಬಿಡು, ಸುಮ್ನೆ ಕೂರಬೇಡ !!

ತಿಂದರೆ ನಿ ತಿ೦ದುಬಿಡು,  ಹಸಿವು ತೋರಬೇಡ
ಕಸುವಿದ್ದಾಗ ನಿ ದುಡಿದುಬಿಡು, ಮೈ ಮುರಿಯಬೇಡ
ವಯಸಿದ್ದಾಗ ನಿ ಬಯಸಿಬಿಡು, ಬಂಜೆಯಾಗಬೇಡ
ನದಿಯಾಗಿ  ನಿ ಹರಿದುಬಿಡು, ಹಿಮವಾಗಬೇಡ
ಸರಿಸಿದರೆ  ನಿ ಚಲಿಸಿಬಿಡು , ಬಂಡೆಯಾಗಬೇಡ
ಕರೆದರೆ ನಿ ಕಲಿಸಿಕೊಡು, ಅಜ್ಞಾನಿಯಾಗಬೇಡ
ನಗುವಾಗ ನಿ ನಕ್ಕುಬಿಡು, ಅಳುವಾಗಿ ಕಾಡಬೇಡ
ಕುಣಿವಾಗ ನಿ ಕುಣಿದುಬಿಡು, ಸುಮ್ನೆ ಕೂರಬೇಡ !!




No comments: